• ಲವ್ ಆಗೋಯ್ತಲ್ಲ - Love Agoythalla Lyrics - Love Mocktail

Download Kannada Songs Lyrics Android App

ಲವ್ ಆಗೋಯ್ತಲ್ಲ - Love Agoythalla Song Lyrics

ಅಯ್ಯಯ್ಯೋ ಚೇಂಜ್ ಆಗ್ಹೊಯ್ತು ನನ್ನ ಜೀವನ.
ಗೊತ್ತಾ ಈ Sudden Changeಗೆ ನೀನೆ ಕಾರಣ.
ಬೇಡ್ಲಿಲ್ಲ ನಾನಂತೂ ದೇವ್ರ್ಹತ್ರಾ ಇವಳನ್ನ.
ಅವನಾಗೇ ಕೊಟ್ಟ ಇಂಥ High Class Beautyನಾ.
ನಿನ್ನಿಂದ ನನ್ನ ರೇಂಜು ಜಾಸ್ತಿಯಾಗಿದೆ.
ಡವ ಡವ ಡವ ನನ್ನ Heartu ಹುಚ್ಚ್ ಹಿಡ್ದಂಗ್ ಬಡ್ದಾಡಿದೆ
ಇಲ್ದೆಇರೋ ಮೀಸೆ ತಿರುಗಿಸೊ ಆಸೆಯಾಗಿದೆ.
ಏನೋ ಒಂಥರ ಹೊಸ Feeling ಸಖತ್ತಾಗಿದೆ. 

ಒ ಓ ಲವ್ ಆಗ್ಹೋಯ್ತಲ್ಲ!!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ.
ಒ ಓ ಲವ್ ಆಗ್ಹೋಯ್ತಲ್ಲ!!!
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ.
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ Colour Colour Dreamsu ಚೆಲ್ಲಿ,
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ.

ಹೇಗಂತ ಹೇಳಿಕೊಳ್ಳೋದು ನನ್ನ ಲಕ್ಕನ್ನ.
ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ .
ನೀ ಸಿಕ್ಕ ಸೊಕ್ಕಲೇ ಮರೆತೆ ನಾನು ನನ್ನ ಲೋಕಾನಾ.
ಯಾಕೋ Doubtu ನನ್ನನು ನೀನು ಒಪ್ಪಿದ್ ನಿಜಾನಾ.
ಎಷ್ಟೋ ಹುಡುಗೀರ ಹಿಂದೆ ಬಿದ್ದು ಅಲೆದೆ ನಾ.
ನೋಡ್ಲಿಲ್ಲ ಒಬ್ಳೂ ಕೂಡ ತಿರುಗಿ ಫೇಸು ಕಟ್ಟನ್ನ.
ಭಗವಂತನ ಮೇಲೆನೇ ನಂಗ್ಯಾಕೊ ಅನುಮಾನ.
ನೀನಾಗೆ ಇಷ್ಟ ಪಟ್ಟೆ ಹೇಗೆ ನನ್ನನಾ.

ಒ ಓ ಲವ್ ಆಗ್ಹೋಯ್ತಲ್ಲ!!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ. 
ಒ ಓ ಲವ್ ಆಗ್ಹೋಯ್ತಲ್ಲ!!!
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ. 
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ.
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ. 
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ Colour Colour Dreamsu ಚೆಲ್ಲಿ, 
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ.

ನಿನ್ ಹಿಂದೆ ಬೀಳ್ಳಿಲ್ಲ, ಲವ್ ಮಾಡು ಅನ್ಲಿಲ್ಲ ,
ಸಿಂಪಲ್ಲಾಗ್ ಇದ್ನಲ್ಲೆ ನಾನು.
ಹಿಂದ್ಮುಂದೆ ನೋಡ್ದೇನೆ, ಬಡಪಾಯಿ ಪ್ರೇಮಿನೇ,
ಒಪ್ಕೊಂಡೆ ಬಿಟ್ಯಲ್ಲೆ ನೀನು.
ಕೈಯಲ್ಲಿ ಕೈ ಇಟ್ಟ, ಆ ಫಸ್ಟು ಟಚ್ಚಲ್ಲೆ,
ಹೊಡ್ದಂಗೆ ಆಯ್ತಲ್ಲೆ ಶಾಕು.
ಮುಟ್ಟೋದು ನಿನ್ನನ್ನ, ಮುಟ್ದಂಗೆ ಮಿಂಚನ್ನ ,
ನಂದಲ್ಲ ನಿಂದೆ ಮಿಸ್ಟೇಕು.
ಅಂಗೈಲಿ ಅಪ್ಸರೇ ಸಿಕ್ಬಿಟ್ಟ ಹಾಗಿದೆ.
ಅದೃಷ್ಟವೇ ಬಂದು ಎದೆಯ ಬಾಗಿಲು ಬಡಿದಿದೆ‌.
ಅಂದವಾದ ಅಚ್ಚರಿ ನನ್ ಕಣ್ಮುಂದೆ ನಿಂತಿದೆ.
ಸಿಂಪಲ್ಲಾಗ್ ಇದ್ದ ಲೈಫು ಈಗ್ ಎಕ್ಕುಟ್ಟ್ ಹೋಗಿದೆ

Tags: