• ಸುಮ್ಮನೆ ಹೀಗೆ - Summane Heege Lyrics - Amar

Download Kannada Songs Lyrics Android App

ಸುಮ್ಮನೆ ಹೀಗೆ - Summane Heege Song Lyrics

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ
ಜೀವವೇ ಹೋಗಲಿ ನೀನಿರೆ ತೋಳಲಿ
ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ

ಸುಮ್ಮನೆ.. ಹೀಗೆ ನಿನ್ನನೇ.

ಮರೆತೇ ಬಿಡುವೆನು ಜಗವ ನಡು ನಡುವೆ…
ಎಲ್ಲೋ ಹೊರಟರೆ ಎಲ್ಲೋ ತಲಿಪಿರುವೆ
ಎಂತ ಚೆಂದ ದೂರದಿಂದ ನೀನು ನೀಡೋ ಹಿಂಸೆ…
ನೀನೇ ನನ್ನ ಸ್ವಂತ ಅಂತ ಲೋಕಕೆಲ್ಲ ಕೂಗಿ ಹೇಳೋ ಆಸೆ…

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ

ಮೊದಲ ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ ಪದೇ ಪದೇ ಮರಳಿ ತರುತಿರುವೇ
ನೂರು ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ ಕೂತು ಬಾಕಿ ಮಾತು ಆಡುವಾಗ ಅಲ್ಲಿ ಬರಲಿ ಸಾವು...

ಸುಮ್ಮನೆ ಹೀಗೆ ನಿನ್ನನೇ…
ನೋಡುತಾ ಪ್ರೇಮಿಯಾದೆನೆ

Tags: