• ಯಜಮಾನ ಟೈಟಲ್ - Yajamana Title Song Lyrics - Yajamana

Download Kannada Songs Lyrics Android App

ಯಜಮಾನ ಟೈಟಲ್ - Yajamana Title Song Song Lyrics

ಯಾರೆ ಬಂದರೂ.. ಎದುರ್ಯಾರೆ ನಿಂತರೂ..
ಪ್ರೀತಿ ಹಂಚುವ ಯಜಮಾನ..
ಜೀವ ಹೋದರು.. ಜಗವೇನೆ ಅಂದರೂ
ಮಾತು ತಪ್ಪದ ಯಜಮಾನ..

ಕೂಗಿ ಕೂಗಿ ಹೇಳುತೈತೆ
ಇಂದು ಜಮಾನ..
ಸ್ವಾಭಿಮಾನ ನನ್ನ ಪ್ರಾಣ
ಎಂಬ ಪ್ರಯಾಣ..
ನಿಂತ ನೋಡು ಯಜಮಾನ..
ನಿಂತ ನೋಡು ಯಜಮಾನ..

ಯಾರೆ ಬಂದರೂ.. ಎದುರ್ಯಾರೆ ನಿಂತರೂ.. 
ಪ್ರೀತಿ ಹಂಚುವ ಯಜಮಾನ..

ಒಬ್ಬನೇ ಒಬ್ಬ..
ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ
ನಮಗಾಗಿ ಬಂದನು..

ಮೇಲೂ ಕೀಳು ಗೊತ್ತೆ ಇಲ್ಲ
ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ..
ಹತ್ತೂರ ಒಡೆಯನೇ..

ನಿನ್ನ ಹೆಸರು.. ನಿಂದೆ ಬೆವರು.. 
ತಾನು ಬೆಳೆದು ತನ್ನವರನ್ನು
ಬೆಳೆಸೋ ಆ ಗುಣ..
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ..
ನಿಂತ ನೋಡು ಯಜಮಾನ..
ನಿಂತ ನೋಡು ಯಜಮಾನ..

ಯಾರೆ ಬಂದರೂ.. ಎದುರ್ಯಾರೆ ನಿಂತರೂ.. 
ಪ್ರೀತಿ ಹಂಚುವ ಯಜಮಾನ..

ಬಿರುಗಾಳಿ ಎದುರು ನಗುವಂತ ದೀಪ..
ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು
ನಿನಗೆ ಕಾಯುವುದು ಅಭಿಮಾನ..
ಸೋಲುಗೂ ಸೋಲದ ಗೆದ್ದರೂ ಬೀಗದ
ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ..
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು..
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು..
ನಿಂತ ನೋಡು ಯಜಮಾನ..
ನಿಂತ ನೋಡು ಯಜಮಾನ..

Tags: