Download Kannada Songs Lyrics Android App

ಒಂದೇ ಸಲ - Onde Sala Song Lyrics
ಒಂದೇ ಸಲ ಕಣ್ಣ ಮುಂದೆ
ಯಾರೊ ತಂದು ಇಟ್ಟಂತಿದೆ
ಹೊಸ ಭೂಮಿ ಹೊಸ ಬಾನು
ಬೀಸೋ ಗಾಳಿಯಲ್ಲು ಮಂದಹಾಸವು
ನಾಳೆಯಲ್ಲ ಇಂದೆ ಅಂದವಾದವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಫೀ
ಲೈಫ್ ಜೊತೆ ಒಂದ್ ಸೆಲ್ಫೀ...
ಲೈಫ್ ಜೊತೆ ಒಂದ್ ಸೆಲ್ಫೀ
ತೆಗೆದುಕೊ ಬಿಗಿದಪ್ಪಿ
ಒಂದೆ ಸಲ ಕಣ್ಣ ಮುಂದೆ
ಯಾರೊ ತಂದು ಇಟ್ಟಂತಿದೆ
ಹೊಸ ಭೂಮಿ... ಹೊಸ ಬಾನು
ಎಲ್ಲೆಡೆ ಚಲ್ಲಿದೆ ಸೂರ್ಯನ ಬೆಳಕು
ನೀನಗು ಉಂಟು ಅದರ ಪಾಲು
ಕಡಲ ಜೋರು ಕಾಡಿನ ಮೌನ
ಹಕ್ಕಿಯ ಹಾಡು ಸುಮ್ಮನೆ ಕೇಳು
ನಿನಗಿದೆ ಉಸಿರು
ನಿನಗಿದೆ ಹೆಸರು
ನೀನಲ್ಲ ಕಲ್ಲು
ಜಗಕೆ ಇಂದು ನೀನ್ಯಾರೆಂದು
ಬಾ ಕೂಗಿ ಹೇಳು
ನಿನ್ನ ಬೊಗೆಸೆಯಲಿ ಚಂದ್ರ ಬಿಂಬವು
ಸಾಗೋ ಹಾದಿ ತುಂಬ ಸಾಲು ದೀಪವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಫೀ
ಲೈಫ್ ಜೊತೆ ಒಂದ್ ಸೆಲ್ಫೀ...
ಲೈಫ್ ಜೊತೆ ಒಂದ್ ಸೆಲ್ಫೀ
ತೆಗೆದುಕೊ ಬಿಗಿದಪ್ಪಿ
ಎತ್ತರ ಎತ್ತರ ಪರ್ವತ ಕೂಡ
ಏರಿ ನಿಲ್ಲಲು ಪಾದ ಕೆಳಗೆ
ಸಾವಿರ ಮೈಲು ಪಯಣ ಕೂಡ
ಶುರುವು ಮೊದಲ ಹೆಜ್ಜೆಯೊಳಗೆ
ಇರುವೆಗು ಕೂಡ ಇರುವುದು ಇಲ್ಲಿ
ಬಾಳೋಕೆ ಹಕ್ಕು
ಬದುಕು ಎಂದು ಬಂಧನ ವಲ್ಲ
ಸ್ವಾತಂತ್ರ ಬೇಕು
ಚಿಟ್ಟೆ ಹಿಂಡು ಬಂದು ಮುತ್ತು ಕೊಟ್ಟವು
ಬೆಳ್ಳಿ ಮೋಡವೆಲ್ಲ ಅಪ್ಪಿಕೊಂಡವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಫೀ
ಲೈಫ್ ಜೊತೆ ಒಂದ್ ಸೆಲ್ಫೀ...
ಲೈಫ್ ಜೊತೆ ಒಂದ್ ಸೆಲ್ಫೀ
ತೆಗೆದುಕೊ ಬಿಗಿದಪ್ಪಿ