Download Kannada Songs Lyrics Android App

ಆಕಾಶದ ಕನ್ನಡಿ - Aakaashada Kannadi Song Lyrics
ಆಕಾಶದ ಕನ್ನಡಿ ಕಡಲು
ತುಂಡಾಗಿ ಹಾರಿದೆ ಮುಗಿಲು
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ ಖಾಲಿ ಖಾಲಿ
ಆಕಾಶವ ತಬ್ಬಿದೆ ಕಡಲು
ಈ ಕಾರಣ ಸಾಲದೇ ನಗಲು
ಎಂಥ ಶೈಲಿ ಬಂತು ತೇಲಿ
ಕಾಮನ ಬಿಲ್ಲು ವಾಲಿ ವಾಲಿ
ನೀಡುತ ಉಸಿರನು ಸಾಲ
ಎಲ್ಲಿಗೊ ಹೊರಟಿದೆ ಗಾಳಿ
ಕೈಯ್ಯಲಿ ನೆನಪಿನ ಚೀಲ
ಸುಮ್ಮನೆ ಸಾರುವ ಚಾಳಿ
ದಾರಿಗೆ ಹೆಜ್ಜೆಯ ಸ್ನೇಹ
ಹೇಳು ಎಲ್ಲಿಯ ತನಕ
ದೂರವು ತುಂಬ ಸನಿಹ
ಭರವಸೆ ಇರುವ ತನಕ
ಎದೆಯಲಿ ಬಿಟ್ಟುಹೋದ ಗುರುತು
ನೆನೆದರೆ ಮತ್ತೆ ಮತ್ತೆ ಹೊಸತು
ಬರೆದರೆ ಹಾಡಾಗಿ ಹೊರ ಹೋಯಿತು
ಆಕಾಶವು ಚಿತ್ರದ ಸಂತೆ
ಬೇಕೆಂದರು ಸಿಗದು ಮತ್ತೆ
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ
ಖಾಲಿ ಖಾಲಿ
ಮೊಗ್ಗಿನ ಎದೆಯ ಒಳಗೆ
ಜಾರಲು ಇಬ್ಬನಿ ತವಕ
ತೇವವು ಆರುವ ಮುನ್ನ
ಎಲೆಯಲಿ ಇರುವೆ ಜಳಕ
ರುತುಗಳು ಓಡುತ ಇರಲಿ
ಸ್ರಿಷ್ಟಿಯು ಎಂದಿಗು ತಾಜಾ
ಬದುಕಿನ ಓಟದಿ ಮಾತ್ರ
ಬದಲಾವಣೆಯು ಸಹಜ
ಪರಿಚಯವಾಗಿ ನನಗೆ ನಾನೆ
ಭಾವನೆ ಹಂಚಿಕೊಳ್ಳಬೇಕು
ಒಳಗಿನ ತಮವೆಲ್ಲ ಬೆಳಕಾಗಲಿ
ಆಕಾಶವು ಚಿತ್ರದ ಸಂತೆ
ಬೇಕೆಂದರು ಸಿಗದು ಮತ್ತೆ
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ
ಖಾಲಿ ಖಾಲಿ