Download Kannada Songs Lyrics Android App

Bharathambe Ninna Janmadina - ಭಾರತಾಂಬೆ ನಿನ್ನ ಜನ್ಮ ದಿನ Song Lyrics
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನ್ನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾ ದಿನ
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ
ಹತ್ತಾರು ಭಾಷೆಗಳ ಹೆತ್ತೋಳಮ್ಮ
ನಿನ್ನ ಮಡಿಲಲ್ಲಿ ಗಂಗೆ ತುಂಬಿ ನಗುತಾರಮ್ಮ
ಅನ್ಯರು ಬಂದರೂನು ಮುದ್ದಾಡುವ
ತಾಯಿ ನಮ್ಮೂರ ಅಪ್ಪಿಕೊಂಡು ನಲಿದಾಡುವೆ
ಭೂಗೋಳದಲ್ಲಿ ಒಂದು ಜ್ಯೋತಿ ಇದೆ
ಅದಕ್ಕೆ ಭಾರತ ಮಾತೆ ಎಂಬ ಹೆಸರೂ ಇದೆ
ಲೋಕವೆ ಮೆಚ್ಚುವಂತ ಗೀತೆಯು ಇಲ್ಲಿ ಇದೆ
ವಂದೇ ಮಾತರಂ ಎಂಬ ನಾಮದ ಗಂಧವಿದೆ
ನುಡಿಯುವನೆ ಧನ್ಯ
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ
ಭಾರತ ನಮ್ಮ ಭಾರತ, ನಮ್ಮ ಭಾರತ ನಮ್ಮ ಭಾರತ...
ಉಸಿರಿರುವ ತನಕ ನೀ ಭಾರತೀಯನೆಂದು ಬೀಗು
ಕೊನೆಯುಸಿರೆಳೆವಾಗಲು ವಂದೇ ಮಾತರಂ ಎಂದು ಕೂಗು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನ್ನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾ ದಿನ
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ...
ಭಾರತೀಯರ ಶೌರ್ಯ ಮೆರೆದ ದಿನ