• Mugulu Nage - ಮುಗುಳು ನಗೆ Lyrics - ಮುಗುಳು ನಗೆ

Download Kannada Songs Lyrics Android App

Mugulu Nage - ಮುಗುಳು ನಗೆ Song Lyrics

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ 
ತುಸು ಬಿಡಿಸಿ ಹೇಳು ನನಗೆ 
ನನ ತುಟಿಯೇ ಬೇಕೇ ನಿನಗೆ
ನನ್ನೆಲ್ಲಾ ನೋವಿಗೂ ನಗುವೆ 
ನೀ ಏಕೆ ಹೀಗೆ? 

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 

ಸಾಕಾಗದ ಏಕಾಂತವ 
ನಿನ್ನಿಂದ ನಾ ಕಲಿತೆ 
ಯಾಕಾಗಿ ನೀ ಮರೆ ಮಾಚುವೆ 
ನನ್ನೆಲ್ಲಾ ಭಾವುಕತೆ
ಸೋತಂತಿದೆ ಸಂಭಾಷಣೆ 
ಗೆಲ್ಲುವುದು ನಿನಗೇ ಹೊಸತೆ 
ಅಳುವೊಂದು ಬೇಕು ನನಗೆ
ಅರೆ ಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ  

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ 

ಕಣ್ಣಾಲಿಯ ಜಲಪಾತವ 
ಬಂಧಿಸಲು ನೀ ಯಾರು?
ನೀ ಮಾಡುವ ನಗೆ ಪಾಟಲು 
ಖಂಡಿಸಲು ನಾ ಯಾರು?
ಸಂತೊಷಕೂ ಸಂತಾಪಕೂ 
ಇರಲಿ ಬಿಡು ಒಂದೇ ಬೇರು 
ಕಂಗಳಲಿ ಬಂದಾ ಮಳೆಗೆ 
ಕೊಡೆ ಹಿಡಿವ ಆಸೆಯೆ ನಿನಗೆ 
ಅತ್ತು ಬಿಡು ನನ್ನಾ ಜೊತೆಗೆ 
ನಗಬೇಡ ಹೀಗೆ... 

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ 

lyricskart.com

-------------------ENGLISH-------------------

Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve
Thusu Bidisi Helu Nanage
Nana Thutiye Beke Ninage
Nanella Novigu Naguve
Nee Yeke Heege

Mugulu Nageye Nee Helu
Mugulu Nageye Nee Helu

Saakaagada Ekaanthavaa
Ninninda Naa Kalithe
Yaakaagi Nee Mare Maachuve
Nanella Bhaavukathe
Soothanthide Sambhaashane
Gelluvuduu Ninage Hosathe
Aluvondu Beku Nanage
Are Ghalige Hoogu Horage
Ishtolle Sneehithanaagi
Kaadidare Hege?

Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve

Kannaliya Jalapaathava
Bandhisalu Nee Yaaru?
Nee Maaduva Nagepaatalu
Khandisalu Naa Yaaru?
Santhoshaku Santhaapaku
Irali Bidu Onde Beru
Kangalali Banda Malege
Kode Hidiva Aaseye Ninage
Atthu Bidu Nanna Jothege
Naga Beda Heege

Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve...

Tags: