Download Kannada Songs Lyrics Android App

Yaaru Yenu Maduvaru - ಯಾರು ಏನು ಮಾಡುವರು Song Lyrics
ಆಹಾಹಾ .....ಹಾ.....ಹೇಹೇಹೇ......ಹೇಹೇ........
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಅನ್ನವಾ,ತಿನ್ನದೇ ಚಿನ್ನ ತಿನುವೆಯೇನು.
ಹೊನ್ನಿಗೆ ನಿನ್ನ ನೀ ಮಾರಿ ಕೊಳುವೆಯೇನು,
ಮೂಸದಾ ಹಾದಿಯು ಸುಖವ ತರುವುದೇನು,
ಪ್ರೀತಿಯ ಮರೆತರೆ ಶಾಂತಿ ಇರುವುದೇನು,
ದಾನವನಾಗದೆ,ಮಾನವನಾಗು,ನಗಿಸುತ ನಗುತಲಿ ಬಾಳಲಿ ಸಾಗು,
ಎಂದ ನಾನು ದ್ರೋಹಿ ಏನು ..., ಹಂ
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸುಮ್ಮನೆ ಮಾತಲಿ ಕಾಲ ಕಳೆವೇಯೇಕೆ,
ನಿನ್ನ ಈ ಬಾಳನು ವ್ಯರ್ಥ ಗೂಳಿಸಲೇಕೆ
ತಿರದಾ ಆಸೆಯು ನಿನ್ನ ಮನದಲೇಕೆ,
ಜನಗಳ ತುಳಿಯುವ ನೀಚ ಬುದ್ದಿಯೇಕೆ,
ಎಲ್ಲರೂ ಕಲೆತು,ದ್ವೇಷವ ಮರೆತು ಸೋದರರಂತೆ ದುಡಿಯಿರಿ ಬಂದು,
ಎಂದ ನಾನು ವ್ಯೇರಿಯೇನು....ಹಂ
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,