Download Kannada Songs Lyrics Android App

Aa Rathiye Dharegilidanthe ಆ ರತಿಯೆ ಧರೆಗಿಳಿದಂತೆ Song Lyrics
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲಾ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಮಾಮರ ತೂಗುತ,ಚಾಮರ ಹಾಸುತ,ಪರಿಮಳ ಎಲ್ಲೇಡೇ ಚಲ್ಲುತಿರೆ.
ಗಗನದ ಅಂಚಲಿ ರಂಗನು ಚೆಲ್ಲುತಾ,ಸಂದ್ಯೇಯು ನಾಟ್ಯವಾ ಹಾಡುತಿರೆ.
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯು ನಲಿಯುತಿರೆ ,
ಲ ಲ ಲ ಲಾ ......ಲ ಲ ಲ ಲ ಲಾ
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಪ್ರೇಮದ ಭಾವಕೆ,ಪ್ರೀತಿಯಾ ರಾಗಕೆ,ಮೌನವೇ ಗೀತೆಯಾ ಹಾಡುತಿರೆ,
ಸರಸದ ಸ್ನೇಹಕೆ.ಒಲವಿನ ಕಾಣಿಕೆ,ನೀಡಲು ಅಧರವು ಅರಳುತಿರೆ,
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳು ನಲಿಯುತಿರೆ,ಪ್ರೇಮಿಗಳು ನಲಿಯುತಿರೆ
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.